‘ಚಂದ್ರಿಕ ಚಿತ್ರಕ್ಕೆ ಡಬ್ಬಿಂಗ್ ಪೂರ್ಣ
Posted date: 30 Thu, Apr 2015 – 09:23:23 AM

ಫ಼್ಲೈಯಿಂಗ್ ವೀಲ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಆಶಾ ಅವರು ನಿರ್ಮಿಸುತ್ತಿರುವ ‘ಚಂದ್ರಿಕ ಚಿತ್ರಕ್ಕೆ ರಾಜೇಶ್‌ರಾಮನಾಥ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಪೂರ್ಣವಾಗಿದೆ. ಗುಣವಂತ್ ಸಂಗೀತ ನಿರ್ದೆಶನದ ಈ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ ಸದ್ಯದಲ್ಲೇ ನಡೆಯಲಿದೆ.
   ಜೆ.ಕೆ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಕಾಮನ ಜೇಠ್ಮಾಲನಿ, ಶ್ರೀಮುಖಿ, ಗಿರೀಶ್ ಕಾರ್ನಾಡ್, ಎಲ್.ಬಿ.ಶ್ರೀರಾಂ, ಉದಯ್, ಚಿಕ್ಕಣ್ಣ, ರಮೇಶ್ ಮುಂತಾದವರಿದ್ದಾರೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಯೋಗೇಶ್ ನಿರ್ದೇಶಿಸುತ್ತಿದ್ದಾರೆ. ಕವಿರಾಜ್, ಕರುಣಾಕರ್, ರಘುಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ನಾಗೇಶ್ವರರಾವ್ ‘ಚಂದ್ರಿಕ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಕೆ.ರಾಜೇಂದ್ರಬಾಬು ಛಾಯಾಗ್ರಹಣ, ಸುರೇಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ನಾಗು ಕಲಾ ನಿರ್ದೇಶನ ಹಾಗೂ ವೇಣುಪಾಲ್, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed